Monday, June 4, 2012
Wednesday, May 16, 2012
ಹಸಿರಕಡೆ-ನಮ್ಮ ನಡೆ - ಒಂದು ವಾಕ್-ಕಥಾನಕ......

ಎಂದಿನಂತೆ ಹಸಿರು ಬಣ್ಣದ ಬಂಗಾರಪೇಟೆ ರೈಲಿನಲ್ಲಿ ಆಫೀಸಿಗೆ ಹೋಗುತ್ತಿದ್ದೆವು.. 3 ಜನ ಕುಳಿತುಕೊಳ್ಳಬಹುದಾದ ವಿಶಾಲವಾದ ಎದುರು ಬದಿರಾದ ಸೀಟುಗಳಲ್ಲಿ ತಲಾ ಇಬ್ಬರು ಕುಳಿತು, ಮಾತು ಪ್ರಾರಂಭಿಸಿದ್ದೆವು.. ರಾಜಕೀಯ,ವಿಜ್ಞಾನ,ತಂತ್ರಜ್ಞಾನ ಆ-ಜ್ಞಾನ, ಈ-ಜ್ಞಾನ , ಅಜ್ಞಾನ ಇತ್ಯಾದಿ ವಿಷಯಗಳ ಬಗ್ಗೆ ಬಾಯಿಗೆ ಸಾಕಾಗುವರೆಗೆ ಮಾತನಾಡಿ ಸಮಯ ಕಳೆಯುತ್ತಿದ್ದ ನಮಗೆ ಅಂದು ಹಸಿರಕಡೆ-ನಮ್ಮ ನಡೆ ಎಂಬ ವಿಷಯ ಸಿಕ್ಕಿತ್ತು.ಆ ವಿಷಯ ಎಲ್ಲರನ್ನೂ ಆಕರ್ಷಿತ್ತು.. ನಮ್ಮಲ್ಲಿ ಬಹುತೇಕರು ಬೆಳಗ್ಗೆಯಿಂದ ಸಂಜೆತನಕ ಕಂಪ್ಯೂಟರ್ ಮುಂದೆ ಕುಳಿತು ದುಡಿಯುವ ಸಾಫ್ಟ್ವೇರ್ ಕೂಲಿ ಕಾರ್ಮಿಕರು. :) ದೇಹಕ್ಕೆ ವ್ಯಾಯಾಮ ಬೇಕು ಎಂದು ಅರಿತಿದ್ದರೂ ಪ್ರಾಯೋಗಿಕ ರೂಪಕ್ಕೆ ತರಲು ವಿಫಲರಾಗಿದ್ದವರು :) ಹಾಗಾಗಿ ಆಫೀಸಿನಿಂದ ಮನೆಯವರೆಗೆ . 25 ಕಿಲೋ ಮೀಟರ್ ನಷ್ಟು ಉದ್ದವಾದ ನಡಿಗೆಗೆ ತುಸು ಹೆದರಿಕೆಯಿಂದಲೇ ಒಪ್ಪಿಗೆ ಸೂಚಿಸಿದ್ದರು :)ಮುಂಚೂಣಿಯಲ್ಲಿದ್ದ ನಾನು, ಮೋಹನ, ಬಿಜಲಿ ಪ್ರಕಾಶ್ ಆಫೀಸಿನಲ್ಲಿ ಈ ವಿಷಯ ಪ್ರಸ್ತಾಪಿಸಿದಾಗ ಶಿವಕುಮಾರ್,ಸುರೇಶ,ಶಶಿ, ಕಿಶೋರ ಎಂಬ ಉತ್ಸಾಹಿ ಯುವಕರು ತಮ್ಮೆಲ್ಲ ಕೆಲಸಗಳನ್ನು ಬದಿಗೊತ್ತಿ ಸೇರ್ಪಡೆಯಾದರು. ಇಂತಹ ಕಾರ್ಯಕ್ರಮಗಳಿಗೆ ಸದಾ ತಯಾರಾಗಿ ಇರುವ ಸತೀಶ್ ಹಿರೇಮಠ,ರಾಜೇಶ್ ಜೈ ಎನ್ನುತ್ತಾ ರೆಡಿಯಾದರು. :)ಪೊರ್ವ ನಿಗದಿಯಂತೆ ಶುಕ್ರವಾರದ ಸಂಜೆ 3.30 ಕ್ಕೆ ನಮ್ಮ ಲಂಬಾ-ಸಫರ್ ಗೆ ಹೊರಟು ನಿಂತೆವು.. ಕೆಲವರು ನಮ್ಮ ಮಾತನ್ನು ನಂಬಲೇ ಇಲ್ಲ. ಆದರೂ ಅಲ್-ದೀ-ಬೆಸ್ಟ್ ಹೇಳಿ ಶುಭಾಶಯ ಕೋರಿದರು. ಬೇಗನೆ ಕಛೇರಿ ಬಿಡಬೇಕಾದ್ದರಿಂದ ನಮ್ಮ ವ್ಯವಸ್ಥಾಪಕರಾದ ಪ್ರಸಾದ್ ರವರಿಗೆ ತಿಳಿಸಿ ನೀರಿನ ಬಾಟಲ್, ಬ್ಯಾಗ್ ಗಳೊಂದಿಗೆ ಕಛೇರಿಯ ಆವರಣಕ್ಕೆ ಬಂದು ಭೋಲೋ ಭಾರತ್ ಮಾತಾ ಕೀ ಜೈ ಎನ್ನುತ್ತಾ ಹಸಿರ-ಕಡೆ-ನಮ್ಮ-ನಡೆ ಯನ್ನು ಶುರುಮಾಡಿಯೇ ಬಿಟ್ಟೆವು..ಮಾತಿನ ಭರಾಟೆ ನಾನ್-ಸ್ಟಾಪ್ ಆಗಿ ನಡೆದಿತ್ತು.. ದಾರಿಯೂ ಹಿಂದೆ ಸಾಗುತ್ತಿತ್ತು.. ಮಹದೇವಾಪುರದಿಂದ ಹೊರಟ ಕೆಲವೇ ನಿಮಿಷ ಗಳಲ್ಲಿ ಕೃಷ್ಣರಾಜಪುರ ರೇಲ್ವೇ ಸ್ಟೇಶನ್ ಬಂದಿತ್ತು. ಆತ್ಮ ವಿಶ್ವಾಸವೂ ಬಂತು. ಹೀಗೆಯೇ ಮುಂದೆ ಸಾಗಿ ಬೆನ್ನಿಗಾನಹಳ್ಳಿ ತಲುಪಿದಾಗ,ಬಾಯಾರಿಕೆ ತಣಿಸಲು ಎಳನೀರು ಕುಡಿದೆವು. ಬೂಸ್ಟ್ ಈಸ್ ದ ಸೀಕ್ರೆಟ್ ಆಫ್ ಮೈ ಎನರ್ಜೀ ಎನ್ನುತ್ತಾ ದಾಪುಗಾಲು ಹಾಕಿದೆವು.. ಹಲಸೂರು ಕೆರೆಯಬಳಿ ತಲುಪಿದಾಗ ಏದುಸಿರು ಬಿಡುತ್ತಿದ್ದ ನಮ್ಮ ಗುಂಪಿಗೆ ಕಾರ್ಬೊಹೈಡ್ರೇಟ್ ಮುಂತಾದ ವಿಟಮಿನ್ ಗಳ ಕೊರತೆ ಎದ್ದು ಕಾಣಿಸಿತ್ತು. ಅಲ್ಲಿಯೇ ಸಿಕ್ ದೇವಾಲಯದ ಬಳಿಯಿದ್ದ ಪಂಜಾಬಿ ಹೋಟೆಲೊಂದರಲ್ಲಿ ಲಸ್ಸಿ ಕುಡಿದು ಮೊಸರಿನ ಪೂರಿ ತಿಂದು ಬಲ್ಲೆ-ಬಲ್ಲೆ ಎನ್ನುತ್ತಾ ಮಹಾತ್ಮ ಗಾಂಧಿ ರಸ್ತೆಯ ಕಡೆಗೆ ಹೆಜ್ಜೆ ಹಾಕಿದೆವು..ದಾರಿಯಮಧ್ಯ ಜಾಹೀರತುಗಳನ್ನು ನೋಡುತ್ತಾ ಛಾಯಾಚಿತ್ರಗಳನ್ನು ಕ್ಲಿಕ್ಕಿಸುತ್ತಾ ರಜಾಭವನ ತಲುಪಿದೆವು. ಹೀಗೆ ಮುಂದೆ ಸಾಗಿ ಮಾನ್ಯ ಮುಖ್ಯಮಂತ್ರಿ ಗಳ ನಿವಾಸದ ಮುಂದಿನಿಂದ ಸಾಗಿ ಕೆಂಬನಿ ತಲುಪಿದೆವು. ಅಲ್ಲಿಂದ ವಿಜಯನಗರ, ರಾಜಾಜಿನಗರ ಕಡೆಗೆ ಪಾದ ಬೆಳೆಸಿದೆವು...ಮನೆಗೆ ಹೋಗಿ ಮುಟ್ಟುವಷ್ಟರಲ್ಲಿ ಗಡಿಯಾರದ ಸಣ್ಣ ಮುಳ್ಳು ಒಂಭತಕ್ಕೆ ಬಂದಿತ್ತು.. ದೊಡ್ಡ ಮುಳ್ಳು ಹನ್ನೆರಡರ ಆಸುಪಾಸಿನಲ್ಲಿತ್ತು..ಬಿಸಿನೀರಿನ ಸ್ನಾನ ಮಾಡಿ, ಫುಲ್ಲ್ ಮೀಲ್ಸ್ ಮುಗಿಸಿ "ನಾನವನಲ್ಲ" ಎಂದು ಮಲಗಿ ಕಣ್ಣು ಮುಚ್ಚುವ ಮೊದಲೇ ನಿದ್ದೆ ಬಂದಿತ್ತು..:)ಇದು ಈ ವಾರದ ಭಯಾನಕ ವಾಕ್-ಕಥಾನಕ... ಕಾದು ನೋಡಿ ಮುಂದಿನವಾರದ ತನಕ...ಇರಲಿ ತವಕ ಅಲ್ಲಿಯತನಕ..:)ನಲ್ಮೆಯ ,ಸ್ವಾಮಿ

Wednesday, April 14, 2010
ಆರ್ಕಿಮೀಡಿಸ್
ಆರ್ಕಿಮೀಡಿಸ್ ಇಂಡಿಯಾದಲ್ಲಿ ಹುಟ್ಟಿದ್ದಿದ್ದರೆ
ತೊಟ್ಟಿಯಲ್ಲಿ ಬಿದ್ದಾಗ ಕೂಗ್ತಿದ್ದೆನೋ
ಸುರೇಖಾ ಸುರೇಖಾ ಅಂತ
Friday, February 5, 2010
ಗೆಳೆಯನೊಬ್ಬನ ಮದುವೆಗೆ ಹೋದ ಸಂದರ್ಭದಲ್ಲಿ ; ಯಾರೋ ಹೀಗೆ ಮಾತಾಡ್ತಿದ್ದರು : "ಬರೀ ಮದ್ವೆ ಮಾಡ್ಸೋದೆ ಆಯ್ತು , ನಮ್ಮ್ ಮದುವೆ ಯಾವಾಗ ಆಗುತ್ತೋ" ಅವರ ಈ ಮಾತುಗಳನ್ನು ಒಂದು ಡೈಲೋಗ್ ತರ ಹೀಗೆ ಹೇಳಿದ್ದೆ...
ಬರೀ ಅಕ್ಕಿ-ಕಾಳು ಹಾಕೋದೆ ಆಯ್ತು (ಅಕ್ಕಿ-ಕಾಳು= ಅಕ್ಷತೆ)
ಯಾವ್ ಹಕ್ಕಿಗೂ ಕಾಳು ಹಾಕ್ಲಿಲ್ಲ..
ಹೆಕ್ಕಿ ಹೆಕ್ಕಿ ,ಹಕ್ಕಿಗೆ ಕಾಳು ಹಾಕಿದ್ರೂ , ಅಕ್ಕಿಯಲ್ಲಿ ಕಲ್ಲು ಇದಾವೆ ಅಂತಾರೆ ಮನೆಯವ್ರು !
ನಮ್ಮ ಅಕ್ಕಿ ಯಾವಾಗ ಅನ್ನ ಆಗುತ್ತೋ ಕಾಯ್ಬೇಕು...
Subscribe to:
Posts (Atom)